ಕೂಗು

ನಿಮ್ಮ ಟಿಪ್ಪಣಿ ಬರೆಯಿರಿ

ಕನಸುಗಳ ಕಾಯ್ದಿರಿಸಿ ಕನವರಿಸಿ ಕಾತರಿಸಿ
ಕಡಲ ಅಲೆಗಳಂತೆ ಕಣ್ಮರೆಸಿ ಕಳವಾದೆ
ಕಿರಣೋದಯಕೆ ಮುನ್ನ ಕಾರ್ಮೋಡ ಕವಿದಂತೆ
ಕವಿಯ ಶೃಂಗಾರ ಕಾವ್ಯದಲಿ ರಸಭಂಗವಾದಂತೆ

ಕರುಳ ಬಳ್ಳಿಯ ಕಡಿದೇಕೆ ನೀ ಹೋದೆ
ತಾಯಿಯಾಗುವ ತವಕದಿ ತಬ್ಬಲಿಯು ನಾನಾದೆ
ಯಾವ ಪ್ರೀತಿಯ ಕರೆಗೆ ನೀ ಹೋದೆ ಕಂದ
ಜೋಗುಳವಾ ಪಾಡುವೆನು ಮರಳಿ ಬಾ ಮುಕುಂದ

ನಿನ್ನ ಮರೆಯೋ ಮಾತು

ನಿಮ್ಮ ಟಿಪ್ಪಣಿ ಬರೆಯಿರಿ

ನಿನ್ನ ಮರೆಯೋ ಮಾತು
ಮರೆತುಬಿಡು ನೀನು
ನನ್ನೊಳಗೆ ನೀನು ಬೆರೆತಿರುವಾಗ
ಬೆರೆತಿರುವಾಗ ನಿನ್ನೊಳಗೆ ನಾನು

ಮರೆಯಲಿ ಹೆಂಗೆ ನಿನ್ನ
ಕೆಂದುಟಿಯ ಕಿರುನಗೆಯನ್ನ
ನಿನ್ನೆಡೆಗೆ ಕೂಗಿ ಕರೆವ
ಮುಂಗುರುಳು ಏನೋ ಚೆನ್ನ

ಮನಸೆಂಬ ಮಸಣದಲಿ
ಕನಸುಗಳ ಮಾರಣ ಹೋಮ
ತುಂಬಿರಲು ನಿನ್ನುಸಿರು ಕಣಕಣದಲಿ
ಈ ಪ್ರೀತಿಗೆ ಹೇಗೆ ವಿರಾಮ

ನೀ ಮರೆಯಾದ ಮನದಲ್ಲೀಗ
ಸೋನೆ ಮಳೆ ನಂತರದ ಮೌನ
ಮರೆಯಲಿ ಹೆಂಗೆ ನಿನ್ನ
ಓ! ನನ್ನ ಚಿನ್ನ
ಮರೆಯಲಿ ಉಸಿರಾಡಲು ನಾ
ನಿನ್ನ ಹೆಸರ ಮರೆಯುವ ಮುನ್ನ||

ನನ್ನ “ನೀನು”

3 ಟಿಪ್ಪಣಿಗಳು

ಮುಂಜಾನೆ ಕನಸಿನಲ್ಲಿ ಕಾಡಿಹೋದ
ಮನಸಿನ ಗಾಯ ಹಸಿರು
ನಾ ನಿನ್ನ ನೆನಪಲ್ಲೇ ಕಳೆದುಹೋದೆ
ಒಮ್ಮೆ ಹೇಳಿ ಹೋಗು ಎನ್ನಾ ಹೆಸರು

ನಿನ್ನ ಪ್ರೀತಿಯ ಕಡಲಿಗಾಗಿ ಹಾತೊರೆಯುವ
ಅಲೆಮಾರಿ ದೋಣಿ ನಾನು
ಕಿರುನಗೆಯ ತಂಗಾಳಿ ಅಲೆಯ ಬೀಸಿ
ಮನಸಿನ ದಾರಿ ತೋರು

ಏಕಾಂತದಿ ನಿನ್ನ ನೆನೆದಾಗೆಲ್ಲಾ
ಮನದಲಿ ಆಸೆಗಳು ನೂರೊಂದು
ಸಾಕಿನ್ನು ಈ ಕಣ್ಣಾಮುಚ್ಚಾಲೆಯು
ನನಸು ಮಾಡು ನೀ ಬಂದು

ನಿನ್ನ ನಗೆಯ ಹಾವಳಿ
ಎನ್ನೆದೆಗೂ ಆಗಲಿ
ನಿನ್ನ ಕಣ್ಣ್ಮುಂದೆ ಅಲೆಯುವೆನು
ಬಳಿ ಎನ್ನೆಡೆಗೆ ಸೆಳೆಯುವೆನು

ನಿನ್ನ ಮನಸಲ್ಲೆ ನೆಲೆಸುವೆನು
ನಿನ್ನ ಕನಸನ್ನು ಕದಿಯುವೆನು

 

ಸೂ : ಜಯಂತ್ ಕಾಯ್ಕಿಣಿರವರ ಈ ಹಾಡಿಂದ ಪ್ರೇರೇಪಿತನಾಗಿ ಬರೆದದ್ದು

ಬಾ ಮತ್ತೆ ಬೇಗ

ನಿಮ್ಮ ಟಿಪ್ಪಣಿ ಬರೆಯಿರಿ

ಏನೋ ಕಳೆದುಹೋಗುತಿದೆ
ಇಷ್ಟು ಹೊತ್ತು ಒಟ್ಟಿಗಿದ್ದು
ಹಾಗೆ ದೂರಕೆ ಸರಿಯುತಿದೆ

ನೀ ಜೊತೆಗಿರಲು ಎಂಥಾ ಉಲ್ಲಾಸ
ದಿನವಿಡೀ ಬರೀ ಮೋಜು, ಸಂತೋಷ
ಹೋಗುವುದು ಅನಿವಾರ್ಯ, ಅದ ನಾ ಬಲ್ಲೆ
ಹೆಚ್ಚು ಹೊತ್ತು ಕಾಯಿಸಬೇಡ, ಓ ನನ್ನ ನಲ್ಲೆ

ರವಿವಾರದ ರವಿಯೊಡನೆ ನೀ ಕರಗಿ ಹೋಗಿರುವೆ
ಬಾ ಮತ್ತೆ ಬೇಗ , ಓ ನನ್ನ ವೀಕೆಂಡು
ನೀ ಬರುವ ದಾರಿಯ ಕಾದಿರುವೆ..

– ಇಂತಿ ನಿನ್ನ ಪ್ರೀತಿಯ

ವೀಕೆಂಡ್ ಜೀವಿ

ಹೊಸ ವರುಷ -ಹರುಷ

ನಿಮ್ಮ ಟಿಪ್ಪಣಿ ಬರೆಯಿರಿ

ಇರುಳು ಸರಿದು ಹೊಸ ಸೂರ್ಯ
ಹುಟ್ಟುವ ಹೊತ್ತು
ಮೂಡಣದ ತುಂಬಾ ಹೊಂಬೆಳಕ
ಓಕುಳಿಯ ಎರಚಿ
ಇಳೆಗೆ ತಬ್ಬಿದಾ
ಕತ್ತಲ ಮಬ್ಬನ್ನು ಸರಿಸಿ
ಬಂದಿದೆ ನೋಡ ಹೊಸ ವರುಷ
ಎರಡು ಸಾವಿರದ ಇಪ್ಪತ್ತು
ಹೊತ್ತು ತಂದಿದೆ ಅಮಿತ ಹರುಷ
ಎಲ್ಲೆಲ್ಲೂ ಸಂಭ್ರಮದ ಗೈರತ್ತು

ಕನಸ ಹೆಗಲೇರಿ ಓಡುವ ಜೀವನ
ದೂರ ತೀರ ಯಾನ
ನಾವು – ನೀವುಗಳು
ಆಡಿಸುವಾತನ ಕೈಯ ಗೊಂಬೆಗಳು
ನಾಳೆಯ ಕಂಡವರ್ಯಾರಣ್ಣಾ

ಕಳೆದು ಹೋದ ನೆನ್ನೆಯ,ಕಾಣದ ನಾಳೆಯ
ಹುಡುಕಿದರೆ ಫಲವಿಲ್ಲಾ
ಈಗ-ಇಂದುಗಳ ಅರಿತು ಜೀವಿಸು
ಜೀವನವು ಸವಿಬೆಲ್ಲ

ಹೊಸ ವರುಷದಿ ಬಾಳು ಬೆಳಗಾಗಲಿ
ಸದಾ ಹರಿವ ಹರುಷದ ಚಿಲುಮೆ ಮೂಡಲಿ
ಮನದ ಗವಿಯಲ್ಲಿ
ನವಚೇತನದ ಬೆಳಕು ಹೊಮ್ಮಲಿ
ಒಲುಮೆಯ ಹೊಸ ಸೆಳೆಯು
ಚಿಗುರೊಡೆಯಲಿ ಬಾಳಲಿ

Older Entries